SSLC, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ.! ಯಾವ ದಿನಾಂಕಕ್ಕೆ ಯಾವ ಪರೀಕ್ಷೆ ನಡೆಯಲಿದೆ ನೋಡಿ!
SSLC, 2nd PUC Exam Time Table: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, 10ನೇ ತರಗತಿ ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿಹಿ ಸುದ್ದಿ ನೀಡಿದೆ. ಏನು ಅಂದರೆ ಎಸ್ ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗಳು ಯಾವಾಗ ಪ್ರಾರಂಭವಾಗಿದೆ? ಮತ್ತು ಸಂಪೂರ್ಣ ವೇಳಾಪಟ್ಟಿ ಲಿಸ್ಟ್ ಈ ಕೆಳಗಡೆ ನೀಡಲಾಗಿದೆ ಓದಿ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ:
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಸೂಚನೆ ಪ್ರಕಾರ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪರೀಕ್ಷೆಗಳು ಮಾರ್ಚ್ 01 ರಿಂದ ಪ್ರಾರಂಭವಾಗಿ 19 ರವರೆಗೆ ನಡೆಯಲಿದೆ. ಹಾಗೂ 10ನೇ ತರಗತಿ ವಿದ್ಯಾರ್ಥಿಯ ಪರೀಕ್ಷೆಗಳು ಮಾರ್ಚ್ 20 ರಿಂದ ಪ್ರಾರಂಭವಾಗಿ ಏಪ್ರಿಲ್ 02 ರವರೆಗೆ ನಡೆಯಲಿದೆ.
ತಾತ್ಕಾಲಿಕ ವೇಳಾಪಟ್ಟಿ ಪ್ರಕಟ:
2024-25 ಸಾಲಿನ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಸೋಮವಾರ (02-12-2024) ದಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿನ ಎಲ್ಲ ಶಾಲೆ ಶಿಕ್ಷಕರು ಹಾಗೂ ಕಾಲೇಜ್ ಪ್ರಾಂಶುಪಾಲರು ತಮ್ಮ ಕೊಠಡಿಯ ಪ್ರಕಟ ಫಲಕದಲ್ಲಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ.
ಈ ಒಂದು ವೇಳಾಪಟ್ಟಿ ಕೇವಲ ತಾತ್ಕಾಲಿಕವಾಗಿದೆ ಇನ್ನು ಮುಂದೆ ಕೆಲವಷ್ಟು ವ್ಯತ್ಯಾಸಗಳನ್ನು ಮಾಡಬಹುದು ಅಥವಾ ಮಾಡದೇ ಇರಬಹುದು ಆದ್ದರಿಂದಾಗಿ ವಿದ್ಯಾರ್ಥಿಗಳು ಈಗಿನಿಂದಲೇ ಹೆಚ್ಚಿನ ವಿದ್ಯಾಭಾಸದ ಕಡೆ ಗಮನ ವಹಿಸಬೇಕೆಂದು ವಿನಂತಿಸುತ್ತೇವೆ.
ತಾತ್ಕಾಲಿಕ ವೇಳಾಪಟ್ಟಿ ಲಿಂಕ್: https://drive.google.com/file/d/1-qnXNFBvlTL9zFqkdlsnUNnLt-i5eOS5/view?usp=drivesdk