Ration Card: ಇನ್ಮುಂದೆ ಅನ್ನಭಾಗ್ಯ ಅಕ್ಕಿ ಹಣದ ಬದಲು ಈ ವಸ್ತುಗಳು ಉಚಿತ.! ಯಾವೆಲ್ಲ ಉಚಿತ ವಸ್ತುಗಳ ಮಾಹಿತಿ ಇಲ್ಲಿದೆ ನೋಡಿ!
Ration Card Update: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದು ಸಾಕಷ್ಟು ಜನರು ಗಳಿಗೆ ಸಹಾಯಕವಾಗಿದೆ. ಈ ಒಂದು ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಸ್ಪಷ್ಟನೆ ನುಡಿದಿದ್ದರು 5 ಕೆಜಿ ಅಕ್ಕಿ ಬದಲು ಮನೆಯ ಯಜಮಾನಿ ಖಾತೆಗೆ ನೇರವಾಗಿ 510 ರೂಪಾಯಿ ಹಣವನ್ನು ವರ್ಗಾವಣೆ ಮಾಡುವ ಮೂಲಕ ಸಹಾಯವನ್ನು ಮಾಡಿದೆ. ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆಎಚ್ ಮುನಿಯಪ್ಪನವರು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ದೊಡ್ಡ ಬದಲಾವಣೆ ತರಲು ಹೊರಟಿದ್ದಾರೆ ಇದರ ಸಂಪೂರ್ಣ ಮಾಹಿತಿ ಈ ಕೆಳಗಡೆ ಇದೆ ಓದಿ.
ಹೌದು ಸಚಿವರಾದ ಕೆಎಚ್ ಮುನಿಯಪ್ಪನವರು ಅನ್ನಭಾಗ್ಯ ಯೋಜನೆ ಹಣದ ಬದಲು ಈ ಎಲ್ಲ ವಸ್ತುಗಳನ್ನು ಉಚಿತವಾಗಿ ನೀಡುತ್ತವೆ, ಎಂದು ಘೋಷಣೆಯನ್ನು ಮಾಡಿದ್ದಾರೆ ಮತ್ತು ಯಾವೆಲ್ಲ ವಸ್ತುಗಳನ್ನು ಉಚಿತವಾಗಿ ನೀಡುತ್ತಾರೆ ಎಂಬುದರ ಮಾಹಿತಿ ಕೆಳಗಡೆ ನೀಡಲಾಗಿದೆ.
ಅಕ್ಕಿ ಹಣದ ಬದಲು ಈ ವಸ್ತುಗಳು ಉಚಿತ:
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿಮನೆ ಯಜಮಾನಿಗೆ ಹಣವನ್ನು ಖಾತೆಗೆ ವರ್ಗಾವಣೆ ಮಾಡುವುದು ಸ್ವಲ್ಪ ತಾಂತ್ರಿಕ ದೋಷ ಉಂಟಾಗಿದೆ ಮತ್ತು ಹಣದ ಕೊರತೆಯಿಂದಾಗಿ ಇನ್ನು ಮುಂದೆ ಕುಟುಂಬದ ರೇಷನ್ ಕಾರ್ಡ್ ಸದಸ್ಯರಿಗೆ ಈ ವಸ್ತುಗಳನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ.
ಉಚಿತ ವಸ್ತುಗಳು: ಅನ್ನಭಾಗ್ಯ ಯೋಜನೆ ಅಕ್ಕಿ ಹಣದ ಬದಲು ಈ ವಸ್ತುಗಳು ಉಚಿತವಾಗಿ ಸಿಗಲಿವೇ, ಅಕ್ಕಿ, ರಾಗಿ, ಉಪ್ಪು, ಸಕ್ಕರೆ, ಬೇಳೆ, ಜೋಳ ಮತ್ತು ಇನ್ನು ಮುಂತಾದ ವಸ್ತುಗಳನ್ನು ನೀಡುತ್ತೇವೆ ಎಂದು ಸಚಿವರಾದ ಕೆಎಚ್ ಮುನಿಯಪ್ಪನವರು ಹೇಳಿದ್ದಾರೆ.
ಮೇಲೆ ನೀಡಿರುವ ಉಚಿತ ವಸ್ತುಗಳನ್ನು ಇನ್ನು ಶೀಘ್ರದಲ್ಲಿ ಎಲ್ಲ ಮನೆ ಕುಟುಂಬದ ಯಜಮಾನಿಗಳಿಗೆ ಪ್ರತಿ ತಿಂಗಳು ಒದಗಿಸುವ ಕೆಲಸವನ್ನು ಶೀಘ್ರದಲ್ಲಿ ಕೊಡಲಾಗುತ್ತದೆ, ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ.