Ration Card: ರೇಷನ್ ಕಾರ್ಡ್ ತಿದ್ದುಪಡಿ ಅವಕಾಶ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!

Ration Card: ರೇಷನ್ ಕಾರ್ಡ್ ತಿದ್ದುಪಡಿ ಅವಕಾಶ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!

Ration Card Online Correction: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಕಾದು ಕುಳಿತ ಜನರಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗುಡ್ ನ್ಯೂಸ್ ನೀಡಿದೆ. ಅಂದರೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶವನ್ನು ಮಾಡಿಕೊಡಲಾಗಿದೆ ಇದರ ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ ಓದಿ.

ಹೌದು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವ ಜನರಿಗೆ ಆಹಾರ ಇಲಾಖೆ ಗುಡ್ ನ್ಯೂಸ್ ನೀಡಿದೆ ಇಂದು ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದ್ದು, ಎಷ್ಟರವರೆಗೆ ತಿದ್ದುಪಡಿ ಮಾಡುವ ಸಮಯ ನೀಡಲಾಗಿದೆ? ಏನೆಲ್ಲಾ ತಿದ್ದುಪಡಿ ಮಾಡಿಸಬಹುದು? ಮತ್ತು ಯಾವೆಲ್ಲ ಜಿಲ್ಲೆಗಳಿಗೆ ಅವಕಾಶವನ್ನು ನೀಡಿದ? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದೆ.

ರೇಷನ್ ಕಾರ್ಡ್ ನಲ್ಲಿ ಏನೆಲ್ಲ ತಿದ್ದುಪಡಿ ಮಾಡಿಸಲು ಅವಕಾಶ ನೀಡಿದೆ:

  • ಕುಟುಂಬದ ಸದಸ್ಯರ ಸೇರ್ಪಡೆ
  • ಕುಟುಂಬದ ಸದಸ್ಯರ ಹೆಸರು ತಿದ್ದುಪಡಿ
  • ಸದಸ್ಯರ ಹೆಸರು ತೆಗೆದುಹಾಕುವುದು
  • ಕುಟುಂಬದ ಮುಖ್ಯಸ್ಥರ ಬದಲಾವಣೆ
  • ಸದಸ್ಯರ ಫೋಟೋ ತಿದ್ದುಪಡಿ
  • ಇತರ ಸೇವೆಗಳು

ಈ ಮೇಲೆ ನೀಡಿರುವ ತಿದ್ದುಪಡಿ ಮಾಡಲು ಎಲ್ಲ ಜಿಲ್ಲೆಗಳಿಗೆ ಅವಕಾಶವನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಾಡಿಕೊಡಲಾಗಿದ್ದು, ಕೂಡಲೇ ನಿಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ತಿದ್ದುಪಡಿ ಮಾಡಿಸಬಹುದಾಗಿದೆ.

ಇವತ್ತಿನಿಂದ ಬೆಳಗ್ಗೆ 10:00 ಗಂಟೆಗೆ ರಿಂದ ಸಾಯಂಕಾಲ 5:00 ವರೆಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ರಾಜ್ಯದ ಜನತೆಗೆ ಆಹಾರ ಇಲಾಖೆ ಅವಕಾಶ ನೀಡಿದೆ ಇದರ ಸದುಪಯೋಗ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವ ಜನರು ಪಡೆದುಕೊಳ್ಳಬೇಕಾಗಿದೆ.