PM Usha Scholarship: 12ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ಬರೋಬ್ಬರಿ ₹52,000 ಸ್ಕಾಲರ್ಶಿಪ್ ಅರ್ಜಿ ಆಹ್ವಾನ!
PM Usha Scholarship 2024: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಹಾಯವಾಗಲೆಂದು ಕೇಂದ್ರ ಸರ್ಕಾರ ಪಿಎಂ ಉಷಾ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುವ ಮೂಲಕ ಸಹಾಯ ಮಾಡುತ್ತಿದೆ ಮತ್ತು ಅರ್ಜಿ ಆಹ್ವಾನಿಸಲಾಗಿದೆ. ಇದರ ಸಂಪೂರ್ಣ ಮಾಹಿತಿ ಈ ಕೆಳಗಡೆ ವಿವರಿಸಲಾಗಿದೆ ಓದಿ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿ ವರ್ಷ ವಿದ್ಯಾರ್ಥಿನಿಗೆ/ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಸಾಕಷ್ಟು ಸುಗಮಗೊಳಿಸಲು ವಿವಿಧ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ವಿದ್ಯಾರ್ಥಿಗಳು ಪಿಎಂ ಉಷಾ ಸ್ಕಾಲರ್ಶಿಪ್ ಯೋಜನೆಗೆ ಯಾವೆಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು? ಯಾವೆಲ್ಲ ಸಮಯದಲ್ಲಿ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು? ಹಾಗೂ ಇನ್ನೂ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಿದೆ.
ಪಿಎಂ ಉಷಾ ಸ್ಕಾಲರ್ಶಿಪ್ ಯೋಜನೆ ಪ್ರಯೋಜನ:
ಕೇಂದ್ರ ಸರ್ಕಾರದ ಯೋಜನೆಯಾದ ಪಿಎಂ ಉಷಾ ಸ್ಕಾಲರ್ಶಿಪ್ ಯೋಜನೆ ಅಡಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 80ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಪದವಿ 3 ವರ್ಷ ಶಿಕ್ಷಣ ಪಡೆಯಲು ಈ ಯೋಜನೆಯಿಂದ ಸ್ಕಾಲರ್ಶಿಪ್ ನೀಡಲಾಗುತ್ತದೆ. ಅಂದರೆ ಮೊದಲನೇ ವರ್ಷ 12 ಸಾವಿರ ಉಳಿದ 2 ವರ್ಷ ತಲಾ 20,000 ಸ್ಕಾಲರ್ಶಿಪ್ ನೀಡಲಾಗುತ್ತದೆ.
ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ದ್ವಿತೀಯ ಪಿಯುಸಿ ಅಂಕಪಟ್ಟಿ
- ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದ ಯಾವುದಾದರೂ ಒಂದು ದಾಖಲೆ
- ಫೋಟೋ
- ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವುದು ಹೇಗೆ:
ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡೋ ಮೂಲಕ ಅಲ್ಲಿ ಕೇಳಿರುವ ಎಲ್ಲ ದಾಖಲೆಗಳೊಂದಿಗೆ ನೀವು ಪಿಎಂ ಉಷಾ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಲಿಂಕ್: https://scholarships.gov.in/otrapplication/#/login-page