PM Surya Ghar Yojana: ಮನೆಗೆ ಉಚಿತ ಸೋಲಾರ್ ವಿದ್ಯುತ್ ಅರ್ಜಿ ಪ್ರಾರಂಭ.! ಕೂಡಲೇ ಹೀಗೆ ಅಪ್ಲೈ ಮಾಡಿ!

PM Surya Ghar Yojana: ಮನೆಗೆ ಉಚಿತ ಸೋಲಾರ್ ವಿದ್ಯುತ್ ಅರ್ಜಿ ಪ್ರಾರಂಭ.! ಕೂಡಲೇ ಹೀಗೆ ಅಪ್ಲೈ ಮಾಡಿ!

PM Surya Ghar Yojana 2024: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಕೇಂದ್ರ ಸರ್ಕಾರದಲ್ಲಿ ಮೋದಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಮತ್ತು ತೋರುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಪ್ರತಿಯೊಬ್ಬರ ಮನೆಯಲ್ಲೂ ಉಚಿತ ವಿದ್ಯುತ್ ಸಿಗಲಿ ಮತ್ತು ಅವರ ವಿದ್ಯುತ್ ಬಿಲ್ ಕಟ್ಟುವ ಹೊರೆ ಕಡಿಮೆ ಆಗಲೆಂದು ಹಾಗೂ ಸೌರಶಕ್ತಿಯ ಉಪಯೋಗ ಹೆಚ್ಚಾಗಲೆಂದು ಪಿಎಂ ಸೂರ್ಯ ಘರ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಹೌದು ಈ ಒಂದು ಯೋಜನೆ ಅಡಿಯಲ್ಲಿ ಮನೆ ಮೇಲೆ ಸೌರಶಕ್ತಿ ಅಳವಡಿಸಲು ಸಹಾಯಧನ ನೀಡಲಾಗುತ್ತಿದೆ, ಈ ಒಂದು ಯೋಜನೆಗೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸುವುದು, ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು, ಯಾರೆಲ್ಲ ಅರ್ಜಿ ಸಲ್ಲಿಸಬಹುದು, ಈ ಒಂದು ಯೋಜನೆ ಉಪಯೋಗ ಹಾಗೂ ಇನ್ನೂ ಹೆಚ್ಚಿನ ಮಾಹಿತಿ ಕೇಳಬಾಗದಲ್ಲಿ ನೀಡಲಾಗಿದೆ.

ಪಿಎಂ ಸೂರ್ಯ ಘರ್ ಯೋಜನೆ:

ದೇಶದ ಪ್ರಧಾನ ಮಂತ್ರಿ ಅವರು ಅಂದರೆ ನರೇಂದ್ರ ಮೋದಿ ಅವರು ಭಾರತದಲ್ಲಿ ಸೌರ ಶಕ್ತಿ ಹೆಚ್ಚಾಗಲೆಂಬ ಉದ್ದೇಶದಿಂದ ಹಾಗೂ ದೇಶದ ಬಡ ಜನರ ವಿದ್ಯುತ್ ಬಿಲ್ ಹೊರೆ ಕಡಿಮೆ ಆಗುವ ಸಲುವಾಗಿ ಈ ಒಂದು ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈಗ ಈ ಒಂದು ಯೋಜನೆಗೆ ಅರ್ಜಿ ಪ್ರಾರಂಭವಾಗಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಈ ಒಂದು ಯೋಜನೆ ಸಂಪರ್ಕ ಎಲ್ಲಾ ಜನರು ಹೊಂದಲು 10,000 ಕೋಟಿ ಹಣವನ್ನು ಇದಕ್ಕಾಗಿ ಮೀಸಲಿಟ್ಟಿದ್ದಾರೆ.

ಈ ಯೋಜನೆಯ ಪ್ರಮುಖ ಸೌಲಭ್ಯಗಳು:

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಮುಖಾಂತರ ಮನೆಯ ಮೇಲೆ ಸೌರಶಕ್ತಿ ಅಳವಡಿಸುವುದರಿಂದ ಸಾಕಷ್ಟು ಯೋಜನೆಗಳ ಸೌಲಭ್ಯ ದೊರೆಯುತ್ತದೆ. 25 ವರ್ಷಗಳ ವರೆಗೆ ಯಾವುದೇ ವಿದ್ಯುತ್ ಬಿಲ್ ಕಟ್ಟುವ ಹಾಗಿಲ್ಲ, ಅಂದರೆ ನೀವು ಪ್ರತಿ ತಿಂಗಳು 300 ಯೂನಿಟ್ ವರೆಗೆ ವಿದ್ಯುತ್ತನ್ನು ಉಚಿತವಾಗಿ ಬಳಸಬಹುದು.

ಈ ಯೋಜನೆಯಲ್ಲಿ ಎಷ್ಟು ಸಹಾಯಧನ ದೊರೆಯಲಿದೆ:

  • 150 ಯೂನಿಟ್ ವಿದ್ಯುತ್ ಬಳಸುವವರಿಗೆ: 30,000 ರಿಂದ 60,000 ವರೆಗೆ ಸಿಗುತ್ತದೆ.
  • 150 ರಿಂದ 300 ಯೂನಿಟ್ ವಿದ್ಯುತ್ ಬಳಸುವವರಿಗೆ: 60,000 ರಿಂದ 78,000 ವರೆಗೆ ಸಿಗುತ್ತದೆ.
  • 300 ಯೂನಿಟ್ ವಿದ್ಯುತ್ ಬಳಸುವವರಿಗೆ: 78,000 ವರೆಗೆ ಸಿಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು:

ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು ಈ ಕೆಳಗಿನಂತಿವೆ:

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ 18 ವರ್ಷ ಮೇಲ್ಪಟ್ಟಿರಬೇಕು.
  • ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು ಮತ್ತು ಸ್ವಂತ ಮನೆ ಹೊಂದಿರಬೇಕು.
  • ಅಭ್ಯರ್ಥಿಯ ವಾರ್ಷಿಕ ಆದಾಯ 1.5 ಲಕ್ಷದ ಒಳಗೆ ಇರಬೇಕು.
  • ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಮನೆಯಲ್ಲಿ ಯಾವುದೇ ಸರಕಾರಿ ನೌಕರರು ಇರಬಾರದು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

  • ಆಧಾರ್ ಕಾರ್ಡ್
  • ವಿದ್ಯುತ್ ಬಿಲ್
  • ಬ್ಯಾಂಕ್ ಪಾಸ್ ಬುಕ್
  • ಸ್ವಂತ ಮನೆ ಹೊಂದಿರುವ ದೃಢೀಕರಣ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ ಮತ್ತು ವಿಳಾಸ ಪುರಾವೆ

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ:

ನೀವು ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ, ಮೇಲಿನ ಇಡುವ ಅರ್ಹತೆಗಳನ್ನು ಹೊಂದಿರಬೇಕು ಮತ್ತು ಮೇಲೆ ನೀಡಿರುವ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಕಂಪ್ಯೂಟರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ, ಮನೆಗೆ ಉಚಿತ ವಿದ್ಯುತ್ ಪಡೆಯಲು ಸಹಾಯಧನ ಸಿಗುತ್ತದೆ.

Leave a Comment