New Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ.! ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಇಲ್ಲಿದೆ ಮಾಹಿತಿ ನೋಡಿ!

New Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ.! ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಇಲ್ಲಿದೆ ಮಾಹಿತಿ ನೋಡಿ!

New Ration Card Application: ನಮಸ್ಕಾರ ಎಲ್ಲ ಕರ್ನಾಟಕ ಜನತೆಗೆ, ರಾಜ್ಯದಲ್ಲಿ ಆಹಾರ ಧಾನ್ಯಗಳನ್ನು ಉಚಿತವಾಗಿ ಹಿಡಿದು ಮತ್ತು ರಾಜ್ಯದಲ್ಲಿನ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಈ ಒಂದು ರೇಷನ್ ಕಾರ್ಡ್ ಬೇಕೇ ಬೇಕು, ಹಾಗೂ ಸಾಕಷ್ಟು ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಕಾದು ಕುಳಿತಿದ್ದಾರೆ. ಅಂತ ಜನರಿಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಮಾಡಿಕೊಡಲಾಗಿದೆ.

ಹೌದು ರಾಜ್ಯದಲ್ಲಿನ ಹಾಗೂ ಕೇಂದ್ರದ ಜಾರಿಯಲ್ಲಿರುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಮುಖ್ಯವಾಗಿ ರೇಷನ್ ಕಾರ್ಡ್ ಬೇಕು. ಮತ್ತು ಮನೆಗಳಿಗೆ ಉಚಿತ ರೇಷನ್ ಪಡೆಯಲು ಈ ಒಂದು ಚೀಟಿ ಬೇಕು, ಇದೀಗ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಕಾಲಾವಕಾಶ ನೀಡಲಾಗಿದ್ದು, ಅರ್ಜಿಯನ್ನು ಯಾರೆಲ್ಲ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನ ನಿಡಿದೆ ಓದಿ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕು:

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ನಿವಾಸಿ ಆಗಿರಬೇಕು.
  • ಕುಟುಂಬದಲ್ಲಿ ರೇಷನ್ ಕಾರ್ಡ್ ಹೊಂದದೆ ಇದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು.
  • ಹೊಸದಾಗಿ ಮದುವೆಯಾದ ನವದಂಪತಿಗಳು ಅರ್ಜಿಯನ್ನು ಸಲ್ಲಿಸಬಹುದು.
  • ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಕುಟುಂಬದ ಆದಾಯದ ಪ್ರಕಾರ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ವರ್ಗಾಯಿಸಲಾಗುತ್ತದೆ.

ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ವೋಟರ್ ಐಡಿ
  • ವಯಸ್ಸಿನ ಪ್ರಮಾಣ ಪತ್ರ
  • ಫೋಟೋ
  • ಡ್ರೈವಿಂಗ್ ಲೈಸೆನ್ಸ್
  • ಅಭ್ಯರ್ಥಿಯ ಸ್ವಯಂಘೋಷಿತ ಪ್ರಮಾಣ ಪತ್ರ

ಹೊಸ ರೇಷನ್ ಕಾರ್ಡ್ ಅರ್ಜಿ ಎಲ್ಲಿ ಸಲ್ಲಿಸಬೇಕು:

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೇಲೆ ನೀಡಿರುವ ದಾಖಲೆಗಳೊಂದಿಗೆ ಮತ್ತು ಅರ್ಹತೆಗಳೊಂದಿಗೆ ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನೀವು ಹೊಸ ರೇಷನ್ ಕಾರ್ಡಗೆ ಅರ್ಜಿ ಸಲ್ಲಿಸಬಹುದು.