Mini Tractor Subsidy: ರಾಜ್ಯದ ರೈತರಿಗೆ ಗುಡ್ ನ್ಯೂಸ್.! ಸಣ್ಣ ಟ್ಯಾಕ್ಟರ್ ಮತ್ತು ರೈತರ ಯಂತ್ರೋಪಕರಣಗಳ ಖರೀದಿಸಲು ಶೇ.90 ಸಹಾಯಧನ!

Mini Tractor Subsidy: ರಾಜ್ಯದ ರೈತರಿಗೆ ಗುಡ್ ನ್ಯೂಸ್.! ಸಣ್ಣ ಟ್ಯಾಕ್ಟರ್ ಮತ್ತು ರೈತರ ಯಂತ್ರೋಪಕರಣಗಳ ಖರೀದಿಸಲು ಶೇ.90 ಸಹಾಯಧನ!

Mini Tractor Subsidy: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದ ರೈತರಿಗೆ ಸರ್ಕಾರದ ಕಡೆಯಿಂದ ಬಂಪರ್ ಗುಡ್ ನ್ಯೂಸ್, ಯಾಕೆ ಅಂದ್ರೆ ಸಣ್ಣ ಟ್ಯಾಕ್ಟರ್ ಮತ್ತು ರೈತರ ಯಂತ್ರೋಪಕರಣಗಳ ಖರೀದಿಸಲು 90% ಸಹಾಯಧನ ನೀಡಲಾಗುತ್ತಿದೆ. ಇದರಿಂದ ರೈತರ ಗುಣಮಟ್ಟವನ್ನು ಸುಧಾರಿಸಲು ರೈತರಿಗೆ ಸಾಕಷ್ಟು ಸಹಾಯವಾಗಲಿದೆ, ಇದರ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದೆ ಓದಿ.

ಹೌದು ರಾಜ್ಯದಲ್ಲಿನ ರೈತರ ಅಭಿವೃದ್ಧಿಗಾಗಿ ಸರ್ಕಾರವು ಈ ಒಂದು ಸಬ್ಸಿಡಿಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ರೈತರಿಗೆ ಕೃಷಿ ನಿರ್ವಹಣೆ ಮಾಡಲು ಸಣ್ಣ ಟ್ಯಾಕ್ಟರ್ ಹಾಗೂ ರೈತರು ಬಳಸುವ ಯಂತ್ರೋಪಕರಣಗಳನ್ನು ಖರೀದಿಸಲು ಶೇಕಡ 90ರಷ್ಟು ಸಹಾಯಧನ ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು? ಯಾವೆಲ್ಲ ರೈತರು ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಎಂಬ ಇನ್ನೂ ಮಾಹಿತಿ ಈ ಕೆಳಗೆ ನೀಡಿದೆ.

ಸಬ್ಸಿಡಿ ಯಲ್ಲಿ ಯಾವೆಲ್ಲ ಯಂತ್ರೋಪಕರಣಗಳು ಸಿಗಲಿದೆ:

  • ಸಣ್ಣ ಟ್ಯಾಕ್ಟರ್
  • ಪವರ್ ಟಿಲ್ಲರ್
  • ಕಸ ತೆಗೆಯುವ ಯಂತ್ರಗಳು
  • ರೋಟೋವೇಟರ್
  • ಡೀಸೆಲ್ ಪಂಪ್ಸೆಟ್
  • ಪ್ಲೋರ್ಮಿಲ್
  • ಪವರ್ ಸ್ಪ್ರೇಯರ್ಸ್
  • ಪವರ್ ವೀಡರ್
  • ರೈತರಿಗೆ ಈ ಸಬ್ಸಿಡಿ ಯೋಜನೆ ಅಡಿಯಲ್ಲಿ ಚಾಲಿತ ಯಂತ್ರೋಪಕರಣಗಳು, ಎಣ್ಣೆಗಾನ ಹಾಗೂ ತುಂತುರು ನೀರಾವರಿ ಘಟಕ ಶೇಕಡ 90 ಸಹಾಯಧನ ಸಿಗಲಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಫೋಟೋ
  • 100 ರೂಪಾಯಿಯ ಛಾಪಾ ಕಾಗದ

ಈ ಒಂದು ಯೋಜನೆ ಸಬ್ಸಿಡಿ ಎಲ್ಲಿ ನೀಡುವ ಎಲ್ಲಾ ಯಂತ್ರೋಪಕರಣಗಳು ಸಾಮಾನ್ಯ ಜನರಿಗೆ ಶೇಕಡ 50 ಸಬ್ಸಿಡಿಯಲ್ಲಿ ಸಿಗಲಿದೆ ಮತ್ತು ಪರಿಶಿಷ್ಟ ಪಂಗಡ ವರ್ಗದ ಜನರಿಗೆ ಶೇಕಡ 90ರ ಸಬ್ಸಿಡಿ ಸಹಾಯಧನ ದೊರೆಯಲಿದೆ.

ಸಹಾಯಧನ ಪಡೆಯಲು ರೈತರಿಗೆ ಇರಬೇಕಾದ ಅರ್ಹತೆಗಳು:

  • ಅರ್ಜಿ ಸಲ್ಲಿಸುವ ರೈತರಿಗೆ ಕನಿಷ್ಠ 18 ವರ್ಷ ಪೂರೈಸಬೇಕು.
  • ಅರ್ಜಿ ಸಲ್ಲಿಸುವ ರೈತರು 1 ಎಕರೆ ಜಮೀನು ಹೊಂದಿರಬೇಕು.
  • ಕಳೆದ ವರ್ಷ ಯಾವುದೇ ಸಬ್ಸಿಡಿ ಯೋಜನೆಗಳಲ್ಲಿ ರೈತರು ಸಹಾಯಧನವನ್ನು ಪಡೆದಿರಬಾರದು.

ಮೇಲೆ ನೀಡಿರುವ ದಾಖಲೆಗಳೊಂದಿಗೆ ಮತ್ತು ಅರ್ಹತೆಗಳೊಂದಿಗೆ ನಿಮ್ಮ ಹತ್ತಿರದ ಹೋಬಳಿಗೆ ರೈತರ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Leave a Comment