Solar Pumpset Scheme: ರಾಜ್ಯದ ರೈತರಿಗೆ ಗುಡ್ ನ್ಯೂಸ್.! ಸೋಲಾರ್ ಪಂಪ್ಸೆಟ್ ಪಡೆಯಲು ಶೇ.80ರಷ್ಟು ಸಹಾಯಧನ ಅರ್ಜಿ ಆಹ್ವಾನ!
Solar Pumpset Scheme: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ರೈತರು ವಿದ್ಯುತ್ ಮೋಟಾರ್ ಗಳಿಂದ ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸಲು, ರಾಜ್ಯ ಹಾಗೂ ಕೇಂದ್ರ ಸರ್ಕಾರವು ಜೊತೆಗೂಡಿ ಕುಸುಮ್ ಬಿ ಸೋಲಾರ್ ಪಂಪ್ಸೆಟ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಸೋಲಾರ್ ಪಂಪ್ ಸೆಟ್ ನೀರಾವರಿ ಯೋಜನೆಯ ಪ್ರಯೋಜನ ಪಡೆಯಲು ಈ ಕೆಳಗೆ ನೀಡಿರುವ ಮಾಹಿತಿ ಸಂಪೂರ್ಣ ಓದಿ.
ಹೌದು ವಿದ್ಯುತ್ ಇಲ್ಲದೆ ಜಮೀನುಗಳಿಗೆ ನೀರು ನೀಡಲು ಸಾಕಷ್ಟು ತೊಂದರೆ ಎದುರಿಸುತ್ತಿರುವ ರೈತರಿಗಾಗಿ ಕುಸುಮ್ ಬಿ ಸೋಲಾರ್ ಪಂಪ್ಸೆಟ್ ಯೋಜನೆ ಅಡಿಯಲ್ಲಿ ಶೇಕಡಾ 80ರಷ್ಟು ಸಹಾಯಧನ ಅರ್ಜಿಯನ್ನು ಕರೆಯಲಾಗಿದೆ. ಯೋಜನೆಯಲ್ಲಿ ಸಿಗುವ ಪ್ರಯೋಜನ? ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು? ಅರ್ಜಿಯನ್ನು ಹೇಗೆ ಸಲ್ಲಿಸುವುದು? ಹಾಗೂ ಇನ್ನೂ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಿದೆ.
ಈ ಯೋಜನೆಯಲ್ಲಿ ಸಿಗುವ ಪ್ರಯೋಜನ:
3hp, 5hp, 7.5hp, 10hp ವರಗೆ ಸೋಲಾರ್ ಪಂಪ್ಸೆಟ್ ಅವಕಾಶ ನೀಡಲಾಗಿದ್ದು ರಾಜ್ಯ ಸರ್ಕಾರ ಶೇಕಡ 50ರಷ್ಟು ಮತ್ತು ಕೇಂದ್ರ ಸರ್ಕಾರ ಶೇಕಡ 30ರಷ್ಟು ಸಹಾಯಧನ ನೀಡಲಿದೆ. ಉಳಿದ ಶೇಕಡ 20ರಷ್ಟು ಸಹಾಯಧನ ರೈತರೇ ನೀಡಬೇಕಾಗಿರುತ್ತದೆ. ಇನ್ನು ಹೆಚ್ಚಿನ ಸಹಾಯಧನ ಈ ಕೆಳಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಫೋಟೋ
- ಜಮೀನಿನ ಪಹಣಿ
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ಸಂಖ್ಯೆ
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತ ಉಳ್ಳ ರೈತರು ಮೇಲೆ ನೀಡಿರುವ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಅಥವಾ ಕಂಪ್ಯೂಟರ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಎಸ್ಕಾಂ ಇಲಾಖೆಗೆ ಭೇಟಿ ನೀಡುವ ಮೂಲಕ ಇನ್ನೂ ಹೆಚ್ಚಿನ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.