HDFC Scholarship: ವಿದ್ಯಾರ್ಥಿಗಳಿಗೆ ₹75,000ವರೆಗೆ ಸ್ಕಾಲರ್ಶಿಪ್ ಅರ್ಜಿ ಆಹ್ವಾನ.! ಯಾವೆಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ನೋಡಿ!

HDFC Scholarship: ವಿದ್ಯಾರ್ಥಿಗಳಿಗೆ ₹75,000ವರೆಗೆ ಸ್ಕಾಲರ್ಶಿಪ್ ಅರ್ಜಿ ಆಹ್ವಾನ.! ಯಾವೆಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ನೋಡಿ!

HDFC Scholarship: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಬಡತನದಲ್ಲಿ ಹಾಗೂ ಶಿಕ್ಷಣ ಕಲಿಯಲು ಹಣ ಇಲ್ಲದೆ ಶಿಕ್ಷಣದಿಂದ ವಂಚಿತರಾಗಬಾರದೆಂದು HDFC ಸ್ಕಾಲರ್ಶಿಪ್ ಯೋಜನೆಯನ್ನು ಜಾರಿಗೆ ತಂದಿದ್ದು, ಮತ್ತು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಈ ಕೆಳಗಿನ ನೀಡಿದೆ ಓದಿ.

ಹೌದು ಬಡತನದಲ್ಲಿ ಕೆಲವಷ್ಟು ವಿದ್ಯಾರ್ಥಿಗಳು ಶಿಕ್ಷಣ ಕಲೆಯದೆ ಕೂಲಿ ಕೆಲಸಗಳನ್ನು ಮಾಡುತ್ತಿದ್ದಾರೆ, ಕಾರಣ ಹಣವಿಲ್ಲದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಈ ಒಂದು ಹಣದ ಸಮಸ್ಯೆ ಆಗಬಾರದೆಂದು HDFC ಸ್ಕಾಲರ್ಶಿಪ್ ಯೋಜನೆಗೆ ಅರ್ಜಿಯನ್ನು ಆಹ್ವಾನನಿಸಲಾಗಿದೆ. ಯಾವೆಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಸಿಗಲಿದೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ? ಮತ್ತು ಇನ್ನು ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಿದೆ.

ಯಾವೆಲ್ಲ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು:

  • ವಿದ್ಯಾರ್ಥಿಗಳು ಭಾರತೀಯ ಕಾಯಂ ನಿವಾಸಿ ಆಗಿರಬೇಕು
  • ವಿದ್ಯಾರ್ಥಿಗಳು 1ನೇ ರಿಂದ 12ನೇ ತರಗತಿವರೆಗೆ ಅಧ್ಯಯನ ಮಾಡುತ್ತಿರಬೇಕು. ಅಥವಾ ಮುಂದಿನ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
  • ವಿದ್ಯಾರ್ಥಿಗಳು ತಮ್ಮ ಹಿಂದಿನ ಪರೀಕ್ಷೆಯಲ್ಲಿ ಶೇಕಡ 55 ಅಂಕಗಳೊಂದಿಗೆ ಪಾಸಾಗಿರಬೇಕು, ಮತ್ತು ಅವರ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷದ ಒಳಗಡೆ ಇರಬೇಕು.

ವಿದ್ಯಾರ್ಥಿಗಳಿಗೆ ಎಷ್ಟರವರೆಗೆ ಪ್ರಯೋಜನ ಸಿಗಲಿದೆ:

  • 1ನೇ ರಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ: ₹15,000
  • 7ನೇ ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ Diploma, ITI, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ: ₹18,000
  • ಪದವಿಪೂರ್ವ ಕೋರ್ಸ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ: ₹50,000
  • ವೃತ್ತಿಪರ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ: ₹75,000

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಫೋಟೋ
  • ಆಧಾರ್ ಕಾರ್ಡ್
  • ಕಾಲೇಜ್ ಪ್ರವೇಶ ಪಡೆದ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್
  • ಹಿಂದಿನ ತರಗತಿ ಅಂಕಪಟ್ಟಿ
  • ವೋಟರ್ ಐಡಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2024

ಅರ್ಜಿ ಸಲ್ಲಿಸುವುದು ಹೇಗೆ:

ಈ ಒಂದು ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಮೇಲೆ ನೀಡುವ ದಾಖಲೆಗಳು ಹಾಗೂ ಅರ್ಹತೆಗಳೊಂದಿಗೆ, ಈ ಕೆಳಗಡೆ ನೀಡಿರುವ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುವ ಮೂಲಕ. ಅಲ್ಲಿ ಕೇಳಲಾದ ಎಲ್ಲ ದಾಖಲೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ನಂತರ ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಲಿಂಕ್: https://www.hdfcbankecss.com/