Gruhalakshmi Scheme: ಗೃಹಲಕ್ಷ್ಮಿ ಹಣ ಇನ್ಮುಂದೆ 3 ತಿಂಗಳಿಗೊಮ್ಮೆ ಮಾತ್ರ ಜಮಾ.! ಫಲಾನುಭವಿಗಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ!
Gruhalakshmi Scheme: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದಾಗಿ ಮಹಿಳೆಯರಿಗೆ ಪ್ರತಿ ತಿಂಗಳು ಮೂಲಕ ಸಾಕಷ್ಟು ಸಹಾಯವನ್ನು ಮಾಡುತ್ತಾ ಬಂದಿದೆ. ಇದೀಗ ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ಕಹಿ ಸುದ್ದಿಯನ್ನು ನೀಡಿದೆ. ಏನು ಅಂದ್ರೆ ಗೃಹಲಕ್ಷ್ಮಿ ಯೋಜನೆ ಹಣ ಇನ್ನು ಮುಂದೆ ಮೂರು ತಿಂಗಳಿಗೊಮ್ಮೆ ಮಾತ್ರ ಜಮಾ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ, ಇದು ನಿಜಾನಾ ಅಥವಾ ಸುಳ್ಳು ಎಂಬುದರ ಮಾಹಿತಿ ಈ ಕೆಳಗೆ ಸಂಪೂರ್ಣ ನೀಡಿದೆ ಓದಿ.
ಹೌದು ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ 2000 ಹಣದಿಂದ ಮಹಿಳೆಯರು ತಮ್ಮ ಮನೆ ಸಣ್ಣಪುಟ್ಟ ಖರ್ಚುಗಳು ಹಾಗೂ ತಮ್ಮ ಸ್ವಂತ ವ್ಯಾಪಾರ, ಉದ್ಯಮ ನಡೆಸಲು ಸಾಕಷ್ಟು ನೆರವಾಗಿದೆ ಇದೀಗ ಈ ಯೋಜನೆಯಲ್ಲಿ ಹಣ ಪಡೆಯುತ್ತಿರುವ ಮಹಿಳೆಯರಿಗೆ ದೊಡ್ಡ ಸಂಕಷ್ಟ ಉಂಟಾಗಿದೆ. ಇದರ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಯನ್ನು ಏನು ನೀಡಿದ್ದಾರೆ ಎಂಬುದರ ಮಾಹಿತಿ ಈ ಕೆಳಗಿನ ನೀಡಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ:
ರಾಜ್ಯದಲ್ಲಿ ಇತ್ತೀಚಿನ ದಿನಗಳ ಹಿಂದೆ ಸುದ್ದಿಗಾರರು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಗೃಹಲಕ್ಷ್ಮಿ ಯೋಜನೆ ಹಣ ಇನ್ನೂ ಬಂದಿಲ್ಲವೆಂದು ಕೇಳಿದಾಗ ಲಕ್ಷ್ಮಿ ಹೆಬ್ಬಾಳ್ಕರ್ ಇನ್ನು 4 ರಿಂದ 5 ದಿನಗಳ ಒಳಗೆ ಮಹಿಳೆಯರ ಖಾತೆಗೆ ತಲುಪಲಿದೆ ಎಂದು ಹೇಳಿದ್ದರು, ಆದರೂ ಇನ್ನೂ ಕೂಡ ಮಹಿಳೆಯರ ಖಾತೆಗೆ ಬಂದು ತಲುಪಿಲ್ಲ. ಇದರಿಂದಾಗಿ ಮಹಿಳೆಯರು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೆಲವಷ್ಟು ದಿನಗಳ ಬಳಿಕ ಮತ್ತೊಮ್ಮೆ ಸುದ್ದಿಗಾರರೊಂದಿಗೆ ಮಾತನಾಡಿದಾಗ ಸುದ್ದಿಗಾರರು ಇತ್ತೀಚಿನ ದಿನಗಳ ಹಿಂದೆ ಇನ್ನೂ 4 ರಿಂದ 5 ದಿನಗಳಲ್ಲಿ ಹಣ ಬಿಡುಗಡೆ ಮಾಡುತ್ತೀರಿ ಎಂದು ಹೇಳಿದ್ದೀರಿ, ಆದರೂ ಕೂಡ ಹಣ ಬಂದಿಲ್ಲ ಎಂದು ಪ್ರಶ್ನೆ ನೀಡಿದಾಗ, ಲಕ್ಷ್ಮಿ ಹೆಬ್ಬಾಳ್ಕರ್ ಸಾಕಷ್ಟು ಆಕ್ರೋಶದಿಂದ ನೀವು ಕೂಡ ನಿಮ್ಮ ಸಂಸ್ಥೆಗಳಲ್ಲಿ ನಿಮಗೆ ಸರಿಯಾಗಿ ಸಂಬಳ ನೀಡುತ್ತಾರೆ.
ಎಂದು ಪ್ರಶ್ನೆ ಮರಳಿ ನೀಡಿದ್ದಾರೆ, ಆದರೆ ಸುದ್ದಿಗಾರರು ಈ ಪ್ರಶ್ನೆಗೆ ಹೌದು ಎಂದು ಉತ್ತರಿಸ್ದಾಗ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಇನ್ನು ಬಹಳಷ್ಟು ಆಕ್ರೋಶದಿಂದ, ಸರ್ಕಾರಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ ಸ್ವಲ್ಪ ಹಣದ ವ್ಯತ್ಯಾಸ ಆಗಬಹುದು ಅಂದರೆ ಒಂದು, ಎರಡು ಅಥವಾ ಮೂರು ತಿಂಗಳವರೆಗೆ ಸಮಯ ತೆಗೆದುಕೊಂಡು ಸಂಬಳ ನೀಡಲಾಗುತ್ತದೆ. ಅದೇ ರೀತಿ ಗೃಹಲಕ್ಷ್ಮಿ ಹಣ ಕೂಡ ಮೂರು ತಿಂಗಳಿಗೆ ಬರಬಹುದು ಅಥವಾ ಎರಡು ತಿಂಗಳಿಗೆ ಬರಬಹುದು ಎಂದು ಹೇಳಿಕೆ ನೀಡಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿರುವ ಈ ಒಂದು ಹೇಳಿಕೆ ಪ್ರಕಾರ ಗೃಹಲಕ್ಷ್ಮಿ ಯೋಜನೆ ಹಣ ಮೂರು ತಿಂಗಳಿಗೆ ಬರಬಹುದು ಎಂದು ಸಚಿವೆ ಮಾತಿನ ತೀರ್ಮಾನವಾಗಿದೆ ಎಂದು ಸಾಕಷ್ಟು ಜನರು ಹೇಳುತ್ತಿದ್ದಾರೆ.