BPL Ration Card: ಬಿಪಿಎಲ್ ರೇಷನ್ ಕಾರ್ಡ್ ರದ್ದಾದವರಿಗೆ ಬಂಪರ್ ಗುಡ್ ನ್ಯೂಸ್.! ರದ್ದಾದ ಕಾರ್ಡ್ ಮರಳಿಪಡೆಯಲು ಹೀಗೆ ಮಾಡಿ!
BPL Ration Card: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ಈಗಾಗಲೇ ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ರದ್ದುಗೊಳಿಸಿ ಸಾಕಷ್ಟು ಜನರಲ್ಲಿ ಮತ್ತು ಅದರಲ್ಲಿ ಬಡತನದ ವ್ಯಕ್ತಿಗಳ ರೇಷನ್ ಕಾರ್ಡ್ ಕೂಡ ರದ್ದಾಗಿತ್ತು ಇದೀಗ ಸರ್ಕಾರದ ಕಡೆಯಿಂದ ಬಿಪಿಎಲ್ ರೇಷನ್ ಕಾರ್ಡ್ ರದ್ದಾದವರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದೆ, ಇದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದೆ ಓದಿ.
ಹೌದು ರಾಜ್ಯದಲ್ಲಿ 22 ಲಕ್ಷಕ್ಕೂ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಅದರಲ್ಲಿ ಬಡತನ ವ್ಯಕ್ತಿಗಳು ಯಾವುದೇ ತಪ್ಪು ಮಾಡದೆ ಅವರ ರೇಷನ್ ಕಾರ್ಡ್ ಕೂಡ ಸರ್ಕಾರ ರದ್ದು ಮಾಡಿದೆ ಇಲ್ಲಿಗೆ ಕೆಲವೊಂದು ವ್ಯಕ್ತಿಗಳಿಗೆ ರೇಷನ್ ಕಾರ್ಡ್ ಮರಳಿ ಕೊಡುವುದಾಗಿ ಸರ್ಕಾರ ಖುಷಿ ಸುದ್ದಿಯನ್ನು ನೀಡಿದೆ. ರಾಜ್ಯದಲ್ಲಿ ಎಷ್ಟು ಜನರ ರೇಷನ್ ಕಾರ್ಡ್ ಮರಳಿ ನೀಡಲಾಗಿದೆ? ರೇಷನ್ ಕಾರ್ಡ್ ಮರಳಿ ನೀಡುವ ಪ್ರಕ್ರಿಯೆ ಹೇಗೆ? ನಡೆಯುತ್ತೆ ಎಂಬುದರ ಸಂಪೂರ್ಣ ಮಾಹಿತಿ ಕೆಳಗೆ ನೀಡಿದೆ.
ಬಿಪಿಎಲ್ ರೇಷನ್ ಕಾರ್ಡ್ ಮರಳಿ ನೀಡಿದ ಪ್ರಕ್ರಿಯೆ:
- ಬಾಗಲಕೋಟೆ: ಒಟ್ಟು 8,964 ಬಿಪಿಎಲ್ ರೇಷನ್ ಕಾರ್ಡ್ ಗಳು ಈ ಜಿಲ್ಲೆಯಲ್ಲಿ ರದ್ದಾಗಿದ್ದು, ಮರಳಿ ಪರಿಶೀಲನೆ ಮಾಡಿ 5,500 ಕಾರ್ಡ್ ಗಳನ್ನು ಮರಳಿ ನೀಡಿದ್ದಾರೆ.
- ಬಳ್ಳಾರಿ: ಒಟ್ಟು 12,950 ಬಿಪಿಎಲ್ ರೇಷನ್ ಕಾರ್ಡ್ ಗಳು ಈ ಜಿಲ್ಲೆಯಲ್ಲಿ ರದ್ದಾಗಿದ್ದು, ಮರಳಿ ಪರಿಶೀಲನೆ ಮಾಡಿ 12,600 ಕಾರ್ಡ್ ಗಳನ್ನು ಮರಳಿ ನೀಡಿದ್ದಾರೆ.
- ಕಲ್ಬುರ್ಗಿ: ಒಟ್ಟು 17,925 ಪಿಎಲ್ ರೇಷನ್ ಕಾರ್ಡ್ ಗಳು ಈ ಜಿಲ್ಲೆಯಲ್ಲಿ ರದ್ದಾಗಿದ್ದು, ಮರಳಿ ಪರಿಶೀಲನೆ ಮಾಡಿ 17,606 ಕಾರ್ಡ್ ಗಳನ್ನು ಮರಳಿ ನೀಡಿದ್ದಾರೆ.
- ಮಂಡ್ಯ: ಒಟ್ಟು 10,856 ಬಿಪಿಎಲ್ ರೇಷನ್ ಕಾರ್ಡ್ ಗಳು ಈ ಜಿಲ್ಲೆಯಲ್ಲಿ ರದ್ದಾಗಿದ್ದು, ಮರಳಿ ಪರಿಶೀಲನೆ ಮಾಡಿ 8,826 ಕಾರ್ಡ್ ಗಳನ್ನು ಮರಳಿ ನೀಡಿದ್ದಾರೆ.
- ದಾವಣಗೆರೆ: ಒಟ್ಟು 6,031ಬಿಪಿಎಲ್ ರೇಷನ್ ಕಾರ್ಡ್ ಗಳು ಈ ಜಿಲ್ಲೆಯಲ್ಲಿ ರದ್ದಾಗಿದ್ದು, ಮರಳಿ ಪರಿಶೀಲನೆ ಮಾಡಿ 5,289 ಕಾರ್ಡ್ ಗಳನ್ನು ಮರಳಿ ನೀಡಿದ್ದಾರೆ.
ಬಿಪಿಎಲ್ ರೇಷನ್ ಕಾರ್ಡ್ ಮರಳಿ ಕೊಡುವ ಕಾರ್ಯ ಹೇಗೆ ನಡೆಯುತ್ತೆ:
- ದಾಖಲೆ ಪರಿಶೀಲನೆ: ಬಿಪಿಎಲ್ ರೇಷನ್ ಕಾರ್ಡ್ ರದ್ದಾದ ಬಳಿಕ ಆಹಾರ ಇಲಾಖೆ ಅಭ್ಯರ್ಥಿಗಳ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡುತ್ತದೆ.
- ಮರಳಿ ಪರಿಶೀಲನೆ ಕಾರಣ: ಆರು ತಿಂಗಳು ಹೆಚ್ಚು ರೇಷನ್ ಕಾರ್ಡ್ ಬಳಸದೆ ಇರುವ ಕಾರಣ, ಆದಾಯ ತೆರಿಗೆದಾರರು ಮತ್ತು ಸರ್ಕಾರಿ ನೌಕರರು ಆಗಿದ್ದಲ್ಲಿ.
- ಕಾರ್ಡ್ ಮರಳಿ ನೀಡುವುದು: ರದ್ದಾದ ರೇಷನ್ ಕಾರ್ಡ್ ಮರಳಿ ಪರಶೀಲನೆ ಮಾಡಿದ ನಂತರ ಯಾವುದೇ ತೊಂದರೆ ಇಲ್ಲದಿದ್ದರೆ ಅವರ ಕಾರ್ಡ್ ಗಳನ್ನು ಹೊಸದಾಗಿ ವಿತರಣೆ ಮಾಡಲಾಗುತ್ತದೆ.
ಬಿಪಿಎಲ್ ರೇಷನ್ ಕಾರ್ಡ್ ಇನ್ನು ಮುಂದೆ ಈ ಜನರಿಗೆ ನೀಡುವುದಿಲ್ಲ:
ರಾಜ್ಯದಲ್ಲಿ ತೆರಿಗೆದಾರರು ಮತ್ತು ಕುಟುಂಬದಲ್ಲಿ ಯಾವುದೇ ಸರ್ಕಾರಿ ನೌಕರರು ಇದ್ದರೆ ಅಂತವರಿಗೆ ಬಿಬಿಎಲ್ ರೇಷನ್ ಕಾರ್ಡ್ ರದ್ದುಗೊಳಿಸಲಾಗುತ್ತದೆ ಮತ್ತು ನೀಡುವುದಿಲ್ಲ.
ಸಣ್ಣ ಸಣ್ಣ ರೈತರು ಮತ್ತು ಖಾಸಗಿ ನೌಕರರು, ಸಣ್ಣ ವ್ಯಾಪಾರದಾರರು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಹತೆಯನ್ನು ಹೊಂದಿರುತ್ತಾರೆ.
ರಾಜ್ಯ ಸರ್ಕಾರವು ರದ್ದಾದ ಬಿಪಿಎಲ್ ರೇಷನ್ ಕಾರ್ಡ್ ಅವರಿಗೆ ಮತ್ತೊಂದು ಭರವಸೆ ನೀಡುವ ಮೂಲಕ ಅವರ ಮುಖದಲ್ಲಿ ಖುಷಿಯನ್ನು ತರಲು ಹೊರಟಿದ್ದಾರೆ. ಈ ಪ್ರಕ್ರಿಯೆ ಯಾವುದೇ ಗೊಂದಲವಿಲ್ಲದೆ ಪೂರ್ಣಗೊಳಿಸಿ, ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.