Annabhagya Scheme: ಅನ್ನಭಾಗ್ಯ ಅಕ್ಕಿ ಹಣ ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ.! ಇಲ್ಲಿದೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್!

Annabhagya Scheme: ಅನ್ನಭಾಗ್ಯ ಅಕ್ಕಿ ಹಣ ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ.! ಇಲ್ಲಿದೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್!

Annabhagya Scheme: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಯೋಜನೆಯಾದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿ ಬದಲು ಹಣವನ್ನು ಸಂದಾಯ ಮಾಡುತ್ತದೆ ಮತ್ತು 5 ಕೆಜಿ ಅಕ್ಕಿಯನ್ನು ಕೂಡ ನೀಡುವ ಈ ಒಂದು ಯೋಜನೆ ಆಗಿದೆ. ಈ ಒಂದು ಯೋಜನೆಯಿಂದಾಗಿ ಸಾಕಷ್ಟು ಮನೆಗಳ ಖರ್ಚುಗಳನ್ನು ನಿಭಾಯಿಸಲು ಈ ಒಂದು ಹಣ ಪ್ರಮುಖ ಕಾರಣವಾಗಿದೆ.

ಹೌದು ಇದೀಗ ಅನ್ನ ಭಾಗ್ಯ ಯೋಜನೆ ಈ ತಿಂಗಳ ಅಕ್ಕಿಯ ಹಣ ಬಿಡುಗಡೆ ಆಗಿದ್ದು, ಈ ಒಂದು ಹಣ ಚೆಕ್ ಮಾಡಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊಸ ಲಿಂಕ್ ಬಿಡುಗಡೆ ಮಾಡಿದೆ. ಅನ್ನ ಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಎಷ್ಟು ಜಮಾ ಆಗಿದೆ? ಮತ್ತು ಯಾವಾಗ ಜಮಾ ಆಗಿದೆ? ಎಂಬುದರ ಇನ್ನೂ ಹೆಚ್ಚಿನ ಮಾಹಿತಿ ಈ ಕೆಳಗಿನ ನೀಡಿದೆ ಓದಿ.

ಬಿಪಿಎಲ್ ಕಾರ್ಡ್ ಮತ್ತು ಅಂತೋದಯ ಕಾರ್ಡ್ ಹೊಂದಿದ ಕುಟುಂಬದ ಫಲಾನುಭವಿಗಳಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವುದಾಗಿ ನಮ್ಮ ರಾಜ್ಯ ಸರ್ಕಾರ ಕೈಗೊಂಡಿತ್ತು, ಆದರೆ 5 ಕೆ.ಜಿ ಅಕ್ಕಿ ನೀಡುವುದಾಗಿ ಮತ್ತು ಇನ್ನುಳಿದ 5 ಕೆ.ಜಿ ಅಕ್ಕಿ ಬದಲು ಹಣ ಕುಟುಂಬದ ಯಜಮಾನ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ, ಒಂದು ಕೆಜಿ ಅಕ್ಕಿಗೆ ₹34 ರೂಪಾಯಿಯಂತೆ 5 ಕೆಜಿ ಅಕ್ಕಿಗೆ ₹170 ಪ್ರತಿ ತಿಂಗಳು ಈ ಒಂದು ಅನ್ನ ಭಾಗ್ಯ ಯೋಜನೆಯಿಂದ ಹಣ ವರ್ಗಾವಣೆ ಮಾಡಲಾಗುತ್ತದೆ.

Annabhagya Scheme DBT Status Check:

ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆ ಹಣ ಎಷ್ಟು ಬಂದಿದೆ ಮತ್ತು ಇನ್ನು ಮುಂದೆ ಬರುವ ಯಾವುದೇ ಯೋಜನೆಗಳ ಹಣವನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು, ಮೊದಲು ನಿಮ್ಮ ಮೊಬೈಲ್ ನಲ್ಲಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ತೆರೆಯಿರಿ. ನಂತರ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ, ಆಧಾರ್ ಗೆ ಲಿಂಕ್ ಇರುವ ನಂಬರ್ ಒಟಿಪಿಯನ್ನು ಸರಿಯಾಗಿ ನಮೂದಿಸಿ.

ನಂತರ ಡಿಪಿಟಿ ಕರ್ನಾಟಕ ಅಪ್ಲಿಕೇಶನ್ ಗೆ ಒಂದು ಎಂಪಿನ್ ಕ್ರಿಯೇಟ್ ಮಾಡಿ. ನಿಮಗೆ ಸದಾ ಕಾಲ ನೆನಪು ಇರುವ ಹಾಗೆ, ನಂತರ ನೀವು ಈ ಒಂದು ಅಪ್ಲಿಕೇಶನ್ ನಲ್ಲಿ ನಿಮಗೆ ಯಾವ ಯೋಜನೆಯಿಂದ ಎಷ್ಟು ಹಣ ಬಂದಿದೆ? ಮತ್ತು ಯಾವಾಗ ಬಂದಿದೆ? ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು ಹಾಗೂ ಅನ್ನಭಾಗ್ಯ ಯೋಜನೆ ಹಣ ಕೂಡ ಚೆಕ್ ಮಾಡಬಹುದು.