Gruhalakshmi Scheme: ಕೊನೆಗೂ ಗೃಹಲಕ್ಷ್ಮಿ 15ನೇ ಕಂತಿನ ₹2,000 ಹಣ ಖಾತೆಗೆ ಜಮಾ.! ಮೊದಲು ಈ 14 ಜಿಲ್ಲೆಗಳಲ್ಲಿ ಬಿಡುಗಡೆ!
Gruhalakshmi Scheme: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿನ ಗೃಹಲಕ್ಷ್ಮಿ ಯೋಜನೆಯಿಂದಾಗಿ ಹಲವಾರು ಮಹಿಳೆಯರಿಗೆ ಸಾಕಷ್ಟು ಸಹಾಯವಾಗುತ್ತಾ ಬಂದಿದೆ. ಅಂದರೆ ತಮ್ಮ ಮನೆಯ ಖರ್ಚುಗಳನ್ನು ನಿಭಾಯಿಸಲು ಹಾಗೂ ಅವರು ಸ್ವಂತ ಉದ್ಯಮ ಪ್ರಾರಂಭಿಸಲು, ಈ ಒಂದು ಹಣ ಪ್ರಮುಖ ಕಾರಣವಾಗಿದೆ. ಅದೆ ರೀತಿಯಾಗಿ ಗೃಹಲಕ್ಷ್ಮಿ 15ನೇ ಕಂತಿನ ಹಣಕ್ಕಾಗಿ ಕಾದು ಕುಳಿತ ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಗುಡ್ ನ್ಯೂಸ್ ಸಿಕ್ಕಿದೆ.
ಹೌದು ರಾಜ್ಯದಲ್ಲಿನ ಗೃಹಲಕ್ಷ್ಮಿ ಯೋಜನೆ 15ನೇ ಕಂತಿನ ಹಣ ಸಾಕಷ್ಟು ತಡವಾಗಿ ಜಮಾ ಮಾಡುವ ಪ್ರಕ್ರಿಯೆ ಪ್ರಾರಂಭಗೊಂಡಿದೆ, ಇದರಿಂದ ಮಹಿಳೆಯರಿಗೆ ಒಂದು ಸಿಹಿ ಸುದ್ದಿ ಸಿಕ್ಕಂತಾಗಿದೆ. ಕೊನೆಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ 15ನೇ ಕಂತಿನ ಜಮಾ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಯಾವೆಲ್ಲ ಜಿಲ್ಲೆಗಳಿಗೆ ಮೊದಲು ಬಂದು ಹಣ ತಲುಪಲಿದೆ ಮತ್ತು ಇನ್ನೂ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಿದೆ ಓದಿ.
Gruhalakshmi Scheme 15th Payment:
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ 15ನೇ ಕಂತಿನ ಹಣ ಜಮಾ ಮಾಡುವ ಪ್ರಕ್ರಿಯೆ ನಿನ್ನೆಯಿಂದ ಪ್ರಾರಂಭಗೊಂಡಿದ್ದು (10-12-2024) ಮತ್ತು ಇಂದಿನಿಂದ ಈ ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಲಾಗುತ್ತದೆ, ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಯನ್ನು ನೀಡಿದ್ದಾರೆ, ಆ ಜಿಲ್ಲೆಗಳು ಯಾವುದು ಎಂಬುದನ್ನ ಈ ಕೆಳಗೆ ನೀಡಲಾಗಿದೆ ನೋಡಿ.
ಇದೀಗ ಗೃಹಲಕ್ಷ್ಮಿ ಯೋಜನೆ 15ನೇ ಕಂತಿನ ಹಣ ರಾಜ್ಯದಲ್ಲಿನ ಒಬ್ಬ ಮಹಿಳೆಯರಿಗೆ ಜಮಾ ಆಗಿರುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀವು ನೋಡಬಹುದು. ಈ ಒಂದು ಮಾಹಿತಿಯಿಂದಾಗಿ ಮಹಿಳೆಯರಿಗೆ ಸಾಕಷ್ಟು ಸಿಹಿ ಸುದ್ದಿ ನೀಡಿದಂತಾಗಿದೆ.
ಗೃಹಲಕ್ಷ್ಮಿ ಯೋಜನೆ 15ನೇ ಕಂತಿನ ಹಣ ಮೊದಲು ಈ 14 ಜಿಲ್ಲೆಗಳಿಗೆ ಬಿಡುಗಡೆ:
- ಉಡುಪಿ
- ಉತ್ತರ ಕನ್ನಡ
- ಕಲ್ಬುರ್ಗಿ
- ಕೊಡಗು
- ಕೊಪ್ಪಳ
- ಗದಗ್
- ಚಿಕ್ಕಬಳ್ಳಾಪುರ
- ಬಾಗಲಕೋಟೆ
- ಬೀದರ್
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
- ಯಾದಗಿರಿ
- ಮಂಡ್ಯ
- ರಾಯಚೂರು
ಈ ಮೇಲೆ ನೀಡುವ ಜಿಲ್ಲೆಗಳಿಗೆ ಇಂದಿನಿಂದ ಗೃಹಲಕ್ಷ್ಮಿ 15ನೇ ಕಂತಿನ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ, ಮಹಿಳೆಯರು ತಮ್ಮ ಮೊಬೈಲ್ ನಲ್ಲಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಮೂಲಕ ಸುಲಭವಾಗಿ ನಿಮ್ಮ ಖಾತೆಗೆ ಎಷ್ಟು ಹಣ ಬಂದಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.