Ration Card Cancellation: ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆಯಾ ಎಂದು ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ.!
BPL Ration Card Cancellation List: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಕರ್ನಾಟಕ ರಾಜ್ಯ ಸರ್ಕಾರ ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಪಡೆದವರನ್ನು ಪತ್ತೆ ಹಚ್ಚಿ ಕಾರ್ಡ್ಗಳನ್ನು ರದ್ದು ಮಾಡಲು ಕೆಲಸ ಶುರು ಮಾಡಿದೆ. ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯಾ ಎಂದು ನೀವು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು ಅದು ಹೇಗೆ ಎಂದು ಈ ಕೆಳಗೆ ನೀಡಿದೆ ಓದಿ.
ಹೌದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 22 ಲಕ್ಷಕ್ಕೂ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದಾಗಿವೆ ಎಂದು ಕೆ ಹೆಚ್ ಮುನಿಯಪ್ಪನವರ ಸಹ ಹೇಳಿದ್ದಾರೆ. ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯಾ ಎಂದು ನಿಮ್ಮ ಮೊಬೈಲ್ ನಲ್ಲಿ ತಿಳಿಯಲು ಕೆಳಗೆ ನೀಡಿರುವ ಮಾಹಿತಿ ಓದಿ.
ಯಾವ ಕಾರಣಕ್ಕೆ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಲಿವೆ:
ಬಿಪಿಎಲ್ ರೇಷನ್ ಕಾರ್ಡ್ ಬಡತನ ರೇಖೆಗಿಂತ ಕೆಳಗಡೆ ಇರುವ ಜನರಿಗೆ ಮಾತ್ರ ಸೀಮಿತವಾಗಿದೆ, ಇದರ ನಿಯಮಗಳನ್ನು ಮೀರಿ ಬಿಪಿಎಲ್ ರೇಷನ್ ಕಾರ್ಡ್ ಪಡೆದವರು ಪತ್ತೆ ಹಚ್ಚಿ ರದ್ದು ಮಾಡುವ ಕೆಲಸ ಶುರುವಾಗಿದೆ. ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ನಿಯಮಗಳು ಈ ಕೆಳಗಿನಂತಿವೆ.
- ಕುಟುಂಬದ ಆದಾಯ ತೆರಿಗೆ ಪಾವತಿದಾರರು ಆಗಿರಬಾರದು.
- ಕುಟುಂಬದಲ್ಲಿ ಯಾವುದೇ ಸರ್ಕಾರಿ ನೌಕರರು ಇರಬಾರದು.
- 7.5 ಎಕರೆಗಿಂತ ಹೆಚ್ಚಿಗೆ ಹೋಲ ಇದ್ದವರು BPL ರೇಷನ್ ಕಾರ್ಡ್ ಪಡೆಯಲು ಅರ್ಹತೆ ಹೊಂದಿರುವುದಿಲ್ಲ.
- ಸ್ವಂತಕ್ಕೆ ನಾಲ್ಕು ಚಕ್ರದ ವಾಹನ ಅಥವಾ ಗಾಡಿ ಹೊಂದಿದವರು ಅರ್ಹತೆಯನ್ನು ಹೊಂದಿರುವುದಿಲ್ಲ.
- ಕುಟುಂಬದ ವಾರ್ಷಿಕ ಆದಾಯ ಬಿಪಿಎಲ್ ರೇಷನ್ ಕಾರ್ಡ್ ನಿಯಮದ ಪ್ರಕಾರ ಹೊಂದಿರಬೇಕು.
ರದ್ದಾದ ರೇಷನ್ ಕಾರ್ಡ್ ಪಟ್ಟಿ ನೋಡುವುದು ಹೇಗೆ:
- ಮೊದಲು ನೀವು ಆಹಾರ ಮತ್ತು ನಾಗರಿಕ ಸರಬರಾಜು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಕೆಳಗಡೆ ನೀಡಿರುವ ಮೂಲಕ: https://ahara.kar.nic.in/Home/EServices
- ಮುಂದಿನ ಪುಟದಲ್ಲಿ ಮೂಲೆಯಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ ಈ ರೇಷನ್ ಕಾರ್ಡ್ ಆಯ್ಕೆಮಾಡಿಕೊಳ್ಳಿ, ನಂತರ ಶೋ ಕ್ಯಾನ್ಸಲ್ಡ್/ಸಸ್ಪೆಂಡ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ.
- ನಂತರ ಪುಟದಲ್ಲಿ ನಿಮ್ಮ ಜಿಲ್ಲೆ, ತಾಲೂಕು, ತಿಂಗಳು ಅನ್ನು ಆಯ್ಕೆ ಮಾಡಿಕೊಂಡು Go ಆಯ್ಕೆ ಮಾಡಿ.
ಇಲ್ಲಿ ನಿಮಗೆ ಯಾರೆಲ್ಲಾ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಮತ್ತು ಯಾವ ಕಾರಣಕ್ಕೆ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ.